Publish Date: Wed, 20 Apr 2022 (11:38 IST)
Updated Date: Wed, 20 Apr 2022 (09:40 IST)
ಮಠಗಳ ಅನುದಾನಕ್ಕೂ 30 ಪರ್ಸೆಂಟ್ ಕಮೀಷನ್ ಕೊಡ್ಬೇಕಿದೆ ಎಂಬ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಬಗ್ಗೆ ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ.
ಬೊಮ್ಮಾಯಿ ಸರ್ಕಾರದಲ್ಲಿ ಮಠಗಳಿಂದ 30% ಕಮೀಷನ್ ಪಡೆಯೋದು ಸರ್ವೇ ಸಾಮಾನ್ಯ ಆಗಿದೆ. ಕರ್ನಾಟಕ ಭ್ರಷ್ಟಾಚಾರದ ದುರ್ವಾಸನೆ ಎಲ್ಲೆಡೆಯೂ ಹಬ್ಬಿದೆ. ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡದೇ ಪುರಾವೆ ಕೇಳುತ್ತಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಆದರೆ ಸ್ವಾಮೀಜಿ ಹೇಳಿಕೆಗೆ ಬಿಎಸ್ವೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಿಸಿ ಪಾಟೀಲರಂತೂ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಡುಪಿಯ ಪಲಿಮಾರು ಶ್ರೀಗಳು, ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ಬೇರೇನೋ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.