Select Your Language

Notifications

webdunia
webdunia
webdunia
webdunia

ಸಿಎಂ ಕ್ರಮಕ್ಕೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ?

ಸಿಎಂ ಕ್ರಮಕ್ಕೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ?
ಗದಗ , ಬುಧವಾರ, 20 ಏಪ್ರಿಲ್ 2022 (09:22 IST)
ಗದಗ : ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಜನ್ಮ ದಿನವನ್ನು ಭಾವೈಕ್ಯತಾ ದಿನ ಎಂದು ಘೋಷಿಸಿದ ಸಿಎಂ ಕ್ರಮವನ್ನು ದಿಂಗಾಲೇಶ್ವರ ಸ್ವಾಮೀಜಿ ತೀವ್ರವಾಗಿ ವಿರೋಧಿಸಿದ್ದಾರೆ.

ಆರ್ಎಸ್ಎಸ್ ಬಗ್ಗೆ, ಬ್ರಾಹ್ಮಣರ ಬಗ್ಗೆ ಬಾಯಿಗೆ ಬಂದಂತೆ ತೋಂಟದಾರ್ಯ ಶ್ರೀಗಳು ಮಾತನಾಡುತ್ತಿದ್ರು. ಜಾತಿ ಜಾತಿ ನಡ್ವೆ ತಂದಿಡ್ತಾ ಇದ್ರು. ಅಂಥವರ ಹೆಸರಲ್ಲಿ ಭಾವೈಕ್ಯ ದಿನ ಎಂದು ಘೋಷಿಸಿದ್ದು ತಪ್ಪು.

ಸಿಎಂ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಚಿವ ಸಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಆರೋಪ ಮಾಡೋದು ಸರಿಯಲ್ಲ. ದಿಂಗಾಲೇಶ್ವರರ ಮಠಕ್ಕೆ ಅನುದಾನ ಕೊಟ್ಟಿಲ್ಲ ಅಂತಾ ಹೀಗೆಲ್ಲಾ ಮಾತಾಡ್ತಾ ಇದ್ದಾರೆ. ನಿಮ್ಮ ಪೂರ್ವಾಶ್ರಮದ ಕತೆ ನಮಗೂ ಗೊತ್ತು. ಮೂರುಸಾವಿರ ಮಠದ ಗದ್ದುಗೆಯನ್ನು ತೋಳ್ಬಲದ ಮೂಲಕ ಏರಲು ನೋಡಿದ್ರಿ..

ನೀವು ಪೀಠದಲ್ಲಿದ್ದೀರಿ ಎಂಬ ಕಾರಣಕ್ಕೆ ಸ್ವಾಮೀಜಿ ಎಂದು ಒಪ್ಪಿದ್ದೀವಿ ಅಷ್ಟೇ ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ದಿಂಗಾಲೇಶ್ವರ ಶ್ರೀಗಳು ತಿರುಗೇಟು ನೀಡಿದ್ದಾರೆ. ವ್ಯಕ್ತಿ ವಿಚಾರಗಳ ಚರ್ಚೆಗೆ ವೇದಿಕೆ ನಿರ್ಮಾಣವಾಗಲಿ ಎಂದು ಸವಾಲ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೆ ವಾರ ಬಾಕಿಯಿರುವಾಗ ಭಾವೀ ಪತಿಯನ್ನೇ ಕೊಲ್ಲಲು ಯತ್ನಿಸಿದ ಮದುಮಗಳು!