Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‍ಗೆ ಬೊಮ್ಮಾಯಿ ಟಾಂಗ್

ಕಾಂಗ್ರೆಸ್‍ಗೆ  ಬೊಮ್ಮಾಯಿ ಟಾಂಗ್
ಗದಗ , ಶನಿವಾರ, 16 ಏಪ್ರಿಲ್ 2022 (10:01 IST)
ಗದಗ : ಕಾಂಗ್ರೆಸ್ನವರು ಸ್ವಚ್ಛ ಮನಸ್ಸುಗಳಂತೆ ಮಾತನಾಡುತ್ತಾರೆ. ಸ್ವಲ್ಪ ದಿನ ಕಾದರೆ ಸತ್ಯ ಎದುರಿಸುವ ಸಂದರ್ಭ ಕಾಂಗ್ರೆಸ್ಗೆ ಬರುತ್ತದೆ.

ಆ ಸತ್ಯ ಎದುರಿಸುವ ಶಕ್ತಿ ಕಾಂಗ್ರೆಸ್ನವರು ಪಡೆದುಕೊಳ್ಳಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.

ನಗರದ ವಿವೇಕಾನಂದ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ, ಲೂಟಿ ನಡೆದಿದೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿ ಇದೆ.

ಕಾಂಗ್ರೆಸ್ ಸಾಮಾಜಿಕವಾಗಿ ಒಡೆದು ಆಳುವುದು ಹಾಗೂ ತುಷ್ಟೀಕರಣ ನೀತಿ ಪ್ರಾರಂಭಿಸಿತು. ಭ್ರಷ್ಟಾಚಾರ ಪರಂಪರೆಯನ್ನು ಪ್ರಾರಂಭಿಸಿದ್ದೇ ಕಾಂಗ್ರೆಸ್ ಎಂದು ಆರೋಪಿಸಿದರು.

ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಇಂದು ಹತಾಶರಾಗಿ ನಮ್ಮ ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಶುಭ್ರರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಗಮನಿಸಿದಂತೆ ರಾಜ್ಯದ ವಿರೋಧ ಪಕ್ಷದಲ್ಲಿ ಇಂದು ತೊಳಲಾಟ ಪ್ರಾರಂಭವಾಗಿದೆ.

ನಮ್ಮ ನಾಯಕ ಕೆಎಸ್ ಈಶ್ವರಪ್ಪ ಮೇಲೆ ಕಾಂಗ್ರೆಸ್ ವಿನಾಕಾರಣ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಈಶ್ವರಪ್ಪ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ತನಿಖೆ ನಿಷ್ಠುರವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಸಂಭ್ರಮ ಮುಗಿಸಿ ಊರು ಸೇರಬೇಕಾದವರು ಮಸನಕ್ಕೆ!