Publish Date: Wed, 20 Apr 2022 (09:20 IST)
Updated Date: Wed, 20 Apr 2022 (09:21 IST)
ವಿಶಾಖಪಟ್ಟಣಂ: ಮದುವೆಯಾಗಿ ಸುಂದರ ಕನಸು ಕಾಣಬೇಕಿದ್ದ ವರ ಈಗ ತಾನು ಮದುವೆಯಾಗುವ ಹುಡುಗಿಯಿಂದಾಗಿ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಕಾಲ ಕಳೆಯುವಂತಾಗಿದೆ.
ಮನೆಯವರು ತನಗೆ ಇಷ್ಟವಿಲ್ಲದಿದ್ದರೂ ಅದೇ ವರನೊಂದಿಗೆ ಮದುವೆ ಮಾಡಲು ಯತ್ನಿಸಿದರು ಎಂಬ ಕಾರಣಕ್ಕೆ ವಧು ಭಾವೀಪತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾಳೆ. ಪರಿಣಾಮ ಆತನೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಸರ್ಪೈಸ್ ಗಿಫ್ಟ್ ಕೊಡುವುದಾಗಿ ದೇವಾಲಯವೊಂದಕ್ಕೆ ಕರೆದೊಯ್ದ ಯುವತಿ ಆತನಿಗೆ ಕಣ್ಣು ಮುಚ್ಚಲು ಹೇಳಿ ಚಾಕುವಿನಿಂದ ಇರಿದಿದ್ದಾಳೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾಳೆ.