Publish Date: Tue, 19 Apr 2022 (09:51 IST)
Updated Date: Tue, 19 Apr 2022 (09:55 IST)
ಬೆಂಗಳೂರು: ಪೋರ್ನ್ ವಿಡಿಯೋ ದಾಸನಾಗಿದ್ದ ಪತಿ ತಾನು ನೋಡಿದ ವಿಡಿಯೋದಲ್ಲಿದ್ದ ಮಹಿಳೆ ತನ್ನ ಪತ್ನಿಯೆಂದು ಭಾವಿಸಿ ಆಕೆಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.
40 ವರ್ಷದ ಆರೋಪಿ ತನ್ನ ಮಕ್ಕಳ ಎದುರೇ ಪತ್ನಿಯ ಕೊಲೆ ಮಾಡಿದ್ದಾನೆ. ಎರಡು ತಿಂಗಳ ಹಿಂದೆ ಪೋರ್ನ್ ವಿಡಿಯೋವೊಂದನ್ನು ನೋಡಿದ ಬಳಿಕ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಆಕೆಯ ಶೀಲ ಶಂಕಿಸಿ ತಗಾದೆ ತೆಗೆಯುತ್ತಿದ್ದ.
ಹಿಂದೆ ಇದೇ ವಿಚಾರವಾಗಿ ಕಿತ್ತಾಟವಾಗಿದ್ದು, ಕುಟುಂಬಸ್ಥರಿಗೆ ಸಂಬಂಧಪಟ್ಟ ಕಾರ್ಯಕ್ರಮವೊಂದರಲ್ಲೇ ಪತ್ನಿ ಮೇಲೆ ಹಿಗ್ಗಾ ಮುಗ್ಗಾ ಥಳಿಸಿದ್ದ. ಪರಿಣಾಮ ಮಹಿಳೆ ತೀವ್ರ ಗಾಯಗೊಂಡಿದ್ದಳು. ಇದೀಗ ಪತ್ನಿಯನ್ನು ತನ್ನ ಐವರು ಮಕ್ಕಳ ಎದುರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದೀಗ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.