Publish Date: Mon, 18 Apr 2022 (11:15 IST)
Updated Date: Mon, 18 Apr 2022 (07:07 IST)
ಮುಂಬೈ: ನೆರೆಮನೆಯ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 9 ವರ್ಷದ ಅಪ್ರಾಪ್ತನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಟವಾಡೋಣ ಬಾ ಎಂದು ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಬಾಲಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಬಾಲಕಿ ಖಾಸಗಿ ಅಂಗಾಂಗಳಲ್ಲಿ ನೋವು ಎಂದು ಹೇಳಿದಾಗ ಘಟನೆ ಬಯಲಿಗೆ ಬಂದಿದೆ. ಸದ್ಯಕ್ಕೆ ಬಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಬಂಧಿಸಲಾಗಿಲ್ಲ.