ನವದೆಹಲಿ: ಪ್ರಧಾನಿ ಮೋದಿ ಆಪ್ತ ಕಾರ್ಯದರ್ಶಿ ಎಂದು ವಂಚನೆ ಮಾಡುತ್ತಿದ್ದ ವ್ಯಕ್ತಿಗಾಗಿ ದೆಹಲಿ ಸೈಬರ್ ವಿಭಾಗದ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪ್ರಧಾನಿ ಮೋದಿಗೆ ಟೇಬಲ್ ಬೇಕು ಎಂದು ಹೇಳಿ ವ್ಯಕ್ತಿಯೊಬ್ಬರಿಗೆ ಈಮೇಲ್ ಕಳುಹಿಸಿ ತನ್ನನ್ನು ಸಂಪರ್ಕಿಸುವಂತೆ ಮೊಬೈಲ್ ನಂಬರ್ ಕೂಡಾ ನೀಡಿದ್ದ.
ಆದರೆ ಈಮೇಲ್ ಸ್ವೀಕರಿಸಿದ ವ್ಯಕ್ತಿಗೆ ವಂಚನೆಯ ವಾಸನೆ ಬಡಿದಿದ್ದು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಈಗ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.