Publish Date: Sat, 16 Apr 2022 (06:53 IST)
Updated Date: Sat, 16 Apr 2022 (06:53 IST)
ಗುಂಟೂರು: ಪ್ರೇಯಸಿಯ ಮೇಲೆ ಅನುಮಾನ ಹೊಂದಿದ್ದ ಪ್ರಿಯಕರ ಆಕೆಯ ಕತ್ತು ಸೀಳಿ ಕೊಲೆಗೆ ಯತ್ನಿಸಿದ್ದು, ಪರಿಣಾಮ ಆಕೆ ತೀವ್ರ ಗಾಯಗೊಂಡಿದ್ದಾಳೆ.
ಮಹಿಳೆ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಳು. ಆದರೆ ಇತ್ತೀಚೆಗೆ ಪ್ರಿಯಕರ ಆಕೆಯ ನಡತೆ ಮೇಲೆ ಅನುಮಾನ ಹೊಂದಿದ್ದ.
ಈ ಕಾರಣಕ್ಕೆ ಮನೆಯಲ್ಲಿ ಮಲಗಿದ್ದ ಮಹಿಳೆಯ ಕತ್ತು ಸೀಳಿ ಪರಾರಿಯಾಗಿದ್ದಾನೆ. ತಕ್ಷಣವೇ ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಜೀವ ಉಳಿದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.