Select Your Language

Notifications

webdunia
webdunia
webdunia
webdunia

ಕೊಲೆಗಡುಕರು ಅಂದರ್

ಕೊಲೆಗಡುಕರು ಅಂದರ್
bangalore , ಶುಕ್ರವಾರ, 15 ಏಪ್ರಿಲ್ 2022 (17:48 IST)
ನಿವೃತ್ತ ಯೋಧ ಸುರೇಶ್ @ ಜೂಡ್ ಕೊಲೆ ಪ್ರಕರಣ ಸಂಬಂಧ ಘಟನೆ ನಡೆದ 24 ಗಂಟೆಯಲ್ಲೇ ಕೊಲೆಯ ಪ್ರಮುಖ ಆರೋಪಿ ಬಾಬು ನಾಯಕ್ ಸೇರಿ ಐವರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್​​​​ 13 ರಂದು  ಸುರೇಶ್ ಕೈಕಾಲು ಕಟ್ಟಿ ತಲೆಗೆ ಕಬ್ಬಿಣದ ರಾಡ್​​​​ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಕೊಲೆಯಾದ ಸುರೇಶ್ ಹೆಂಡತಿ-ಮಕ್ಕಳಿಂದ ದೂರಾಗಿ ಹಲಸೂರಿನ ಗೌತಮ್ ಕಾಲೋನಿ ಮನೆಯಲ್ಲಿ ವಾಸವಿದ್ದ. ಈ ವೇಳೆ ಬಾಬು ನಾಯಕ ಸುರೇಶನನ್ನ ಪರಿಚಯ ಮಾಡಿಕೊಂಡಿದ್ದ. ಸುರೇಶನ ಬಳಿ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಸ್ವಂತ ಮನೆ ಇರೋ ಮಾಹಿತಿಯನ್ನ ಬಾಬು ತಿಳಿದುಕೊಂಡು ಸುರೇಶನನ್ನ ಹೆದರಿಸಿ ಹಣ ಸುಲಿಗೆ ಮಾಡಲು  ಪ್ಲ್ಯಾನ್ ರೂಪಿಸಿದ್ದ. ಪ್ಲ್ಯಾನ್​​​​​ನಂತೆ ಆಂಧ್ರದಲ್ಲಿದ್ದ ನಾಲ್ವರು ಸ್ನೇಹಿತರನ್ನ ಬಾಬು ಕರೆಸಿಕೊಂಡು ಸುರೇಶ್ ಹತ್ಯೆ ಮಾಡಿದ್ದಾರೆ. ಇನ್ನು ಪೊಲೀಸರಿಗೆ, ಶ್ವಾನ‌ದಳಕ್ಕೆ ಆರೋಪಿಗಳ ಜಾಡು ಸಿಗಬಾರದೆಂದು ಸುರೇಶನ ಶವದ ಸುತ್ತಮುತ್ತು ಖಾರದಪುಡಿ ಹಾಕಿ ಪರಾರಿಯಾಗಿದ್ದರು. ಹೀಗೆ ಸಿನಿಮೀಯ ರೀತಿ ಕೊಲೆಗೈದ ಬಾಬು ಆಂಡ್ ಟೀಂ ಇದೀಗ ಅಂದರ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಟೆ ಸದ್ದಿಗೆ ಶಾಸಕರ ಸಖತ್ ಸ್ಟೆಪ್ಸ್​