Publish Date: Fri, 15 Apr 2022 (09:26 IST)
Updated Date: Fri, 15 Apr 2022 (09:28 IST)
ಲಕ್ನೋ: ಹೇಳದೇ ಮನೆಯಿಂದ ಹೋದಳೆಂದು ತಂಗಿಯನ್ನು ಅಪ್ರಾಪ್ತ ವಯಸ್ಸಿನ ಅಣ್ಣ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಅಣ್ಣ-ತಂಗಿ ಅಜ್ಜಿಯ ಜೊತೆಗೆ ಮಾವನ ಮನೆಯಲ್ಲಿ ವಾಸವಿದ್ದರು. ಈ ನಡುವೆ ತಂಗಿ ಮನೆಯಿಂದ ಹೊರಹೋಗುವಾಗ ತನಗೆ ಹೇಳದೇ ಇರುವುದು ಅಣ್ಣನ ಕೋಪಕ್ಕೆ ಕಾರಣವಾಗಿತ್ತು. ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಸಹೋದರಿ ಅಣ್ಣನ ಕೋಪಕ್ಕೆ ಜೀವವನ್ನೇ ತೆತ್ತಿದ್ದಾಳೆ.
ಕೊಲೆ ಮಾಡಿದ ಬಳಿಕ ಅಣ್ಣ ಸ್ಥಳದಿಂದ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಅಣ್ಣನನ್ನು ಬಂಧಿಸಲಾಗಿದೆ.