Publish Date: Thu, 14 Apr 2022 (08:55 IST)
Updated Date: Thu, 14 Apr 2022 (09:08 IST)
ಧಾರವಾಡ: ಹೊಲದಲ್ಲಿ ಕಟ್ಟಿದ್ದ ಎತ್ತುಗಳನ್ನು ಕಳ್ಳಲು ಬಂದ ಖದೀಮ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ಇಲ್ಲಿ ನಡೆದಿದೆ.
ಆರೋಪಿಯನ್ನು ಗ್ರಾಮಸ್ಥರೇ ಹಿಡಿದು ಗೂಸಾ ನೀಡಿದ್ದಲ್ಲದೆ, ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಒಂದು ಲಕ್ಷ ರೂ. ಮೌಲ್ಯದ ದುಬಾರಿ ಎತ್ತುಗಳನ್ನು ಬೊಲೆರೋ ವಾಹನದಲ್ಲಿ ಹೊತ್ತೊಯ್ಯಲು ಖದೀಮ ಹೊಂಚು ಹಾಕಿದ್ದ.
ಈ ವೇಳೆ ಗ್ರಾಮಸ್ಥರು ಬಂದಿದ್ದು, ಆತನ ಜೊತೆಗೆ ಬಂದಿದ್ದ ಸಹಚರರು ಪರಾರಿಯಾಗಿದ್ದಾರೆ. ಪ್ರಮುಖ ಆರೋಪಿಯನ್ನು ಹಿಡಿಯಲಾಗಿದೆ.