Publish Date: Thu, 14 Apr 2022 (09:38 IST)
Updated Date: Thu, 14 Apr 2022 (09:40 IST)
ವಿಜಯವಾಡ: ಮದ್ಯವ್ಯಸನಿಯಾಗಿ ಹಲ್ಲೆ ನಡೆಸಲು ಬಂದ ಮಗನನ್ನು ತಾಯಿಯೇ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯವಾಡದಲ್ಲಿ ನಡೆದಿದೆ.
ಈ ಸಂಬಂಧ 55 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಮಗ ತನ್ನ ಮತ್ತು ಮೊಮ್ಮಕ್ಕಳ ಮೇಲೆ ಹಲ್ಲೆ ನಡೆಸಲು ಬಂದಾಗ ತಾಯಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ.
ಮಗ ಮತ್ತು ಸೊಸೆಗೆ ವಿಚ್ಛೇದನವಾಗಿತ್ತು. ಆದರೆ ರಾಮನವಮಿ ಆಚರಿಸಲು ಮಕ್ಕಳನ್ನು ಅಜ್ಜಿ ಮನೆಗೆ ಕರೆದಿದ್ದಳು. ಈ ವೇಳೆ ಪಾನಮತ್ತನಾಗಿದ್ದ ಬಂದಿದ್ದ ಮಗ ಹಲ್ಲೆ ನಡೆಸಲು ಮುಂದಾಗಿದ್ದ. ಆತನನ್ನು ತಡೆಯಲು ತಾಯಿ ಕೊಡಲಿಯಿಂದ ಏಟು ಕೊಟ್ಟಿದ್ದಾಳೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.