Select Your Language

Notifications

webdunia
webdunia
webdunia
webdunia

ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ! ಮುಂದೇನಾಯ್ತು?

ಪೊಲೀಸರು
ಹೈದರಾಬಾದ್ , ಬುಧವಾರ, 13 ಏಪ್ರಿಲ್ 2022 (11:36 IST)
ಹೈದರಾಬಾದ್ : ಮದ್ಯದ ಅಮಲಿನಲ್ಲಿದ್ದ ಮಗನನ್ನು 55 ವರ್ಷದ ಮಹಿಳೆ ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ.
 
ಅಪ್ಪಲ ಬಾಲ ಕೋಟಾಯ್ಯ (35) ಮೃತ ದುರ್ದೈವಿಯಾಗಿದ್ದು, ಈತ ಟ್ರಕ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಅಪ್ಪಲ ಚಿಟ್ಟೆಮಾ ಎಂದು ಗುರುತಿಸಲಾಗಿದೆ.

ಆರು ವರ್ಷಗಳ ಹಿಂದೆ ಅಪ್ಪಲ ಬಾಲ ಕೋಟಾಯ್ಯ, ಕಂಚಿಕಚೆರ್ಲಾದ ಸಿರಿಶಾರನ್ನು ಮದುವೆಯಾಗಿದ್ದನು. ಆದರೆ ಇತ್ತೀಚೆಗೆ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದನು. ಆದರೆ ಭಾನುವಾರ ರಾಮನವಮಿ ಆಚರಿಸಲು ಚಿಟ್ಟೆಮ್ಮ ತನ್ನ ಮೊಮ್ಮಕ್ಕಳನ್ನು ಆಹ್ವಾನಿಸಿದ್ದಳು. 

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಚಿಟ್ಟೆಮ್ಮ ಅವರ ಮನೆಗೆ ಅಪ್ಪಲ ಬಾಲ ಕೋಟಾಯ್ಯ ಬಂದಿದ್ದರು. ಈ ವೇಳೆ ಕೋಟಾಯ್ಯ ತನ್ನ ತಾಯಿ ಮತ್ತು ಇಬ್ಬರು ಮಕ್ಕಳ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಚಿಟ್ಟೆಮ್ಮ ಮಕ್ಕಳನ್ನು ರಕ್ಷಿಸಿ ಅಕ್ಕಪಕ್ಕದ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. 

ಕೋಟಾಯ್ಯ ಮತ್ತೆ ತಮ್ಮ ಮೇಲೆ ಎಲ್ಲಿ ಹಲ್ಲೆ ನಡೆಸುತ್ತಾನೋ ಮತ್ತು ಆತನಿಂದ ತಮ್ಮ ಮೊಮ್ಮಕ್ಕಳನ್ನು ಹೇಗೆ ರಕ್ಷಿಸುವುದೋ ಎಂಬ ಭಯದಿಂದ ಚಿಟ್ಟೆಮ್ಮ ಕೊಡಲಿಯಿಂದ ಕೋಟಾಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್‌ಗಳಿಗೆ ಹಂಚಲು ಕೇಂದ್ರ ಸಂಚು