ನವದೆಹಲಿ: ಮಹಿಳೆಯ ಮೇಲೆ ಕಾಮುಕರು ಅತ್ಯಾಚಾರ ನಡೆಸಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯ ಮೇಲೆ ಅತ್ಯಾಚಾರವಾಗಿರುವುದಾಗಿ ಪೊಲೀಸರಿಗೆ ಕರೆ ಬಂದಿತ್ತು. ಅದರಂತೆ ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚಾರಣೆಗಿಳಿದಿದ್ದರು.
ಅದರಂತೆ ಘಟನೆ ನಡೆದ ನಾಲ್ಕೇ ಗಂಟೆಯೊಳಗೆ ಅತ್ಯಾಚಾರವೆಸಗಿದ ಮೂವರು ಕಾಮುಕರನ್ನು ಬಂಧಿಸಲಾಗಿದೆ. ಪೊಲೀಸರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.