Publish Date: Fri, 15 Apr 2022 (20:52 IST)
Updated Date: Fri, 15 Apr 2022 (20:55 IST)
ನಿನ್ನೆ ಇಡೀ ವಿಶ್ವದಾದ್ಯಂತ ಬಿಡುಗಡೆಯಾದ ಕೆಜಿಎಫ್ 2 ಸಿನಿಮಾ ಇತಿಹಾಸ ಸೃಷ್ಟಿಸಿದೆ. ಯಶ್ ನಟನೆಯ ಈ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ರು.250 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿದೆ. ದೇಶದ ನಾನಾ ಭಾಗದ ಬಹುತೇಕ ವಿಮರ್ಶಕರು 4 ಸ್ಟಾರ್ ಕೊಟ್ಟು, ಕನ್ನಡ ಸಿನಿಮಾ ಬಗ್ಗೆ ಮೆಚ್ಚಿ ಕೊಂಡಾಡಿದ್ದಾರೆ. ತೆಲುಗು, ಮಲಯಾಳಂ, ಹಿಂದಿ ಭಾಷೆಯ ಅಭಿಮಾನಿಗಳು ಅಭೂತಪೂರ್ವವಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಅದರಲ್ಲೂ ಬಾಲಿವುಡ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ..ಮೊದಲ ದಿನ ಯಾರೂ ಊಹಿಸದಷ್ಟು ಗಳಿಕೆ ಮಾಡಿದೆ..ಈ ಚಿತ್ರ ಮೊದಲ ದಿನ 54 ಕೋಟಿ ಬಾಚಿಕೊಂಡಿದ್ದು ವಿಶೇಷವಾಗಿದೆ.. ಈ ಮೂಲಕ ಬಾಲಿವುಡ್ನಲ್ಲಿ ಮೊದಲ ದಿನವೇ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಖ್ಯಾತಿ ಕೆಜಿಎಫ್- 2ಗೆ ಸಿಕ್ಕಿದೆ