Select Your Language

Notifications

webdunia
webdunia
webdunia
Monday, 7 April 2025
webdunia

ತಾಳಿ ಕಟ್ಟೋ ವೇಳೆಯಲ್ಲೇ ವರನನ್ನು ಬಂಧಿಸಿದ ಪೊಲೀಸರು! ಮುಂದೇನಾಯ್ತು?

ಮಧ್ಯಪ್ರದೇಶ
ಮಧ್ಯಪ್ರದೇಶ , ಭಾನುವಾರ, 17 ಏಪ್ರಿಲ್ 2022 (08:45 IST)
ಭೋಪಾಲ್ : ಮದುವೆ ಮಂಟಪದಿಂದ ವರ ಅಥವಾ ವಧು ಎಸ್ಕೇಪ್ ಆಗೋದು, ತಾಳಿ ಕಟ್ಟೋ ವೇಳೆ ವರ ಅಥವಾ ವಧುವಿನ ಲವ್ವರ್ ಗಲಾಟೆ ಮಾಡಿದಂತಹ ಅನೇಕ ಘಟನೆಗಳ ಸುದ್ದಿಗಳನ್ನು ಓದಿದ್ದೇವೆ.

ಆದರೆ ಇದೀಗ ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಹೌದು. ವರ ಇನ್ನೇನೋ ವಧುವಿಗೆ ತಾಳಿ ಕಟ್ಟಲು ಅಣಿಯಾಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಎಂಟ್ರಿ ಕೊಟ್ಟ ಪೊಲೀಸರು ವರನನ್ನು ಅರೆಸ್ಟ್ ಮಾಡಿ ಕರೆದೊಯ್ದಿದ್ದಾರೆ. ಕಾರಣ ವರ ಅತ್ಯಾಚಾರ ಪ್ರಕರಣವೊಂದರ ಆರೋಪಿ.

ಈ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ತಾಳಿ ಕಟ್ಟುವುದಕ್ಕೂ ಮನ್ನ ಮೆರವಣಿಗೆ ಹೊರಡುವುದು ಅಲ್ಲಿನ ಸಂಪ್ರದಾಯವಾಗಿದೆ. ಅಂತೆಯೇ ಹೀಗೆ ಮೆರವಣಿಗೆ ಹೊರಡಲು ತಯಾರಾಗುತ್ತಿದ್ದ ವರನನ್ನು ಜಬಲ್ಪುರ್ ಪೊಲೀಸರು ಬಂದು ಅತ್ಯಾಚಾರ ಆರೋಪದ ಮೇಲೆ ಬಂಧಿಸಿದ್ದಾರೆ. 

ಮದುವೆ ಮಾಡಿಕೊಳ್ಳುವ ನೆಪದಲ್ಲಿ ವರ, ಆತನ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿತ್ತು. ಅಲ್ಲದೆ ಈ ಸಂಬಂಧ ಜಬಲ್ಪುರ್ ಲಾರ್ಡ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಮದುವೆಯಾಗುವುದಾಗಿ ನಂಬಿಸಿ ತನ್ನ ಸ್ನೇಹಿತೆಯನ್ನು ಹೋಟೆಲ್ಗೆ ಕರೆದೊಯ್ದಿದ್ದ ವರ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಳು.

ಈ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ, ವರ ಅನುಜ್ ದುಬೆ ತನ್ನ ಸ್ನೇಹಿತೆ ಮೇಲೆ ಕಳೆದ ಕೆಲ ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದಾಗಿ ಪ್ರಕರಣ ದಾಖಲಾಗಿತ್ತು.

ಯುವತಿ ಜೊತೆ ದೇವಸ್ಥಾನವೊಂದರಲ್ಲಿ ಮದುವೆ ಕೂಡ ಮಾಡಿಕೊಂಡಿದ್ದನಂತೆ. ಈ ಬೆನ್ನಲ್ಲೇ ಆಕೆಯನ್ನು ಹೋಟೆಲ್ ಗೆ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ಬಳಿಕ ಬೇರೆ ಯುವತಿ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದು, ಈ ಸಂಬಂಧ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಳು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಾದ್ಯಂತ 4ನೇ ದಿನವೂ ಭಾರೀ ಮಳೆ