Select Your Language

Notifications

webdunia
webdunia
webdunia
webdunia

ರಾಜ್ಯಾದ್ಯಂತ 4ನೇ ದಿನವೂ ಭಾರೀ ಮಳೆ

ರಾಜ್ಯಾದ್ಯಂತ 4ನೇ ದಿನವೂ ಭಾರೀ ಮಳೆ
ಬೆಂಗಳೂರು , ಭಾನುವಾರ, 17 ಏಪ್ರಿಲ್ 2022 (07:41 IST)
ಬೆಂಗಳೂರು : ನಿನ್ನೆ ಮೊನ್ನೆ ಮಳೆಯ ಅವಾಂತರಗಳಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ.

ಬಿಬಿಎಂಪಿ ಸಂಪೂರ್ಣವಾಗಿ ಎಚ್ಚೆತ್ತಿಲ್ಲ. ಈ ಮಧ್ಯೆ, ಸತತ ನಾಲ್ಕನೇ ದಿನವೂ ಸಂಜೆ ಮಳೆಗೆ ನಗರವು ತತ್ತರಿಸಿದೆ.

ಧೋ ಎಂದು ಒಂದೇ ಸಮನೆ ಸುರಿದ ಮಳೆಯಿಂದ ನಗರದ ರಸ್ತೆಗಳೆಲ್ಲಾ ಸಂಪೂರ್ಣ ಜಲಮಯವಾಗಿ ವಾಹನ ಸವಾರರು ಪರದಾಡಿದ್ದಾರೆ.

ವಸಂತನಗರದ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ನಿಂತು, ವಾಹನಗಳು ಕೆಟ್ಟು ನಿಂತಿವೆ. ಎಂಜಿ ರೋಡ್, ಶಾಂತಿನಗರ, ಹಲಸೂರು, ಶಿವಾಜಿನಗರ ಸೇರಿ ಹಲವೆಡೆ ಭಾರೀ ಮಳೆ ಆಗಿದ್ದು, ತಗ್ಗು ಪ್ರದೇಶ ಮನೆಗಳಿಗೆ ಇವತ್ತು ನೀರು ನುಗ್ಗಿ, ಜನ ಕಂಗಾಲಾಗಿದ್ದಾರೆ.  

ಗದ್ದೆಗಳಿಗೆಲ್ಲಾ ನೀರು ನುಗ್ಗಿ ಅಪಾರ ಬೆಳೆಹಾನಿ ಸಂಭವಿಸಿದೆ. ಹಾವೇರಿಯಲ್ಲಿ ಸಿಡಿಲು ಹೊಡೆದು ತೆಂಗಿನ ಮರಧಗಧಗಿಸಿದೆ. ಶಿವಮೊಗ್ಗ, ಗದಗ, ಹಾಸನ ಜಿಲ್ಲೆಗಳಲ್ಲಿಯೂ ಭಾರೀ ಮಳೆ ಆಗಿದೆ. ನಾಳೆಯೂ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾವಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ! ?