Publish Date: Fri, 15 Apr 2022 (07:08 IST)
Updated Date: Fri, 15 Apr 2022 (08:24 IST)
ಬೆಂಗಳೂರು : ನಿನ್ನೆ ಸಂಜೆ ಮಳೆಗೆ ಬೆಂಗಳೂರು ನಗರ ತತ್ತರಿಸಿ ಹೋಗಿದೆ.
ಒಂದೇ ಒಂದು ಮಳೆಗೆ ಸಿಲಿಕಾನ್ ಸಿಟಿ ಮುಳುಗಿ ಹೋಗಿದೆ. ಸತತ ಮಳೆಯ ಅವಾಂತರಕ್ಕೆ ಜನರು ಹೈರಾಣಾಗಿ ಹೋದರು.
ಕತ್ರಿಗುಪ್ಪೆ, ಕಾಮಾಕ್ಯ, ಉತ್ತರಹಳ್ಳಿ, ಚಾಮರಾಜಪೇಟೆ, ಎಂ.ಜಿ ರೋಡ್, ಮೈಸೂರು ರಸ್ತೆ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರದಲ್ಲಿ ಮಳೆ ಅಬ್ಬರ ಜೋರಾತ್ತು.
ಕಾಮಾಕ್ಯ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಯಲ್ಲಿ ನೀರು ನಿಂತು, ತೇಲಿ ಬಂದ ಕಾರುಗಳು, ಸ್ಕೂಟರ್ಗಳು ಒಂದರ ಮೇಲೊಂದು ನಿಂತಿರುವುದು ಕಂಡುಬಂದವು.
ಕಾರುಗಳ ಒಳಗೂ ನೀರು, ಮನೆ ಒಳಗೂ ನೀರು ತುಂಬಿಕೊಂಡಿತ್ತು. ಫ್ರಿಡ್ಜ್, ಟಿವಿ, ವಾಷಿಂಗ್ ಮೆಷಿನ್,ಮಿಕ್ಸಿ, ಮಂಚ ಎಲ್ಲವೂ ನೀರುಪಾಲಾಗಿತ್ತು.
ವೃದ್ಧರೊಬ್ಬರ ಮನೆಗೆ 4 ಅಡಿಗೂ ಹೆಚ್ಚು ನೀರು ನುಗ್ಗಿದ್ದು ಮನೆಯ ವಸ್ತುಗಳೆಲ್ಲ ನೀರು ಪಾಲಾಗಿದೆ. ಮನೆಯಲ್ಲಿ ವೃದ್ಧ ದಂಪತಿ ನಮ್ಮ ಜೀವ ಉಳಿದಿದ್ದೇ ಹೆಚ್ಚು ಎಂಬ ಆತಂಕದಲ್ಲೇ ರಾತ್ರಿ ಕಳೆದಿದ್ದಾರೆ.