ಬೆಂಗಳೂರು : ಬೇಸಿಗೆ ಬಂದರೆ ಸಾಕು ಮಾವುಗಳದೇ ಸಾಮ್ರಾಜ್ಯ. ಮ್ಯಾಂಗೋ ಕೊಳ್ಳದವರೇ ಇಲ್ಲ.
ಮಾವಿನ ಹಣ್ಣಿನ ರುಚಿ ಸವಿಬೇಕು ಅನ್ನೋರಿಗೆ ಈ ಬಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಯುಗಾದಿ ಬಳಿಕ ಎಲ್ಲಿ ನೋಡಿದ್ರೂ ಘಮಘಮಿಸುವ ಮಾವಿನ ಹಣ್ಣುಗಳದ್ದೇ ಕಾರುಬಾರು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮಾವು ಬೆಳೆ ನಿರೀಕ್ಷೆಗಿಂತ ಕಡಿಮೆ ಫಸಲು ಬಂದಿದೆ. ಏಪ್ರಿಲ್ ಅಂತ್ಯಕ್ಕೆ ಫಸಲು ಕೈಗೆ ಬರುವ ನಿರೀಕ್ಷೆ ಇದೆ.
ಹೀಗಾಗಿ ಕೇವಲ 40% ರಿಂದ 50% ಇಳುವರಿ ಬರಬಹುದು ಅಂತಾ ಮಾವು ನಿಗಮದ ತಾಂತ್ರಿಕ ಸಮಿತಿ ಊಹಿಸಿದೆ. ಈ ವರ್ಷ ಕರ್ನಾಟಕದಲ್ಲಿ ಕೇವಲ 8 ಲಕ್ಷ ಮೆಟ್ರಿಕ್ ಟನ್ ಮಾವು ಬರೋ ಅಂದಾಜು ಮಾಡಲಾಗಿದೆ. ಮೇನಲ್ಲಿ ಹೆಚ್ಚಿನ ಮಾವು ಬರಬಹುದು.
ಮಾವಿನ ಇಳುವರಿ ಕಡಿಮೆಯಾಗುವುದರಿಂದ ರೇಟ್ ಸಹ ಹೆಚ್ಚಾಗಲಿದೆ ಅಂತಾ ಹೇಳಲಾಗುತ್ತಿದೆ.
ಇನ್ನೂ ಈ ಬಾರಿ ಮಾವಿನ ಹಣ್ಣಿನ ಬೆಲೆ ದುಪ್ಪಟ್ಟು ಜಾಸ್ತಿ ಆಗಿದೆ. ಕಳೆದ ವರ್ಷ ಕೆಜಿಗೆ 150 ರಿಂದ 200 ರೂಪಾಯಿಗೆ ಸಿಗುತ್ತಿದ್ದ ಮಾವು ಡಬಲ್ ಬೆಲೆ ಆಗಿದೆ. ಬಾದಾಮಿ ಕೆಜಿಗೆ 300 ರೂಪಾಯಿ,
ರಸಪೂರಿ ಕೆ.ಜಿಗೆ 250 ರೂಪಾಯಿ, ಹಿಮಪಾಶ್ ಕೆಜಿಗೆ 300 ರೂಪಾಯಿ, ಬೈಗನಪಲ್ಲಿ 200 ರೂಪಾಯಿ ಆಗಿದೆ. ಈ ಬಾರಿ ಮಾವು ದುಬಾರಿಯಾಗಿರೋದಕ್ಕೆ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.