Publish Date: Mon, 11 Apr 2022 (12:42 IST)
Updated Date: Mon, 11 Apr 2022 (14:44 IST)
ಬೆಂಗಳೂರು : ಬೆಲ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ.
ದೇಶದಲ್ಲಿ ಅತಿಹೆಚ್ಚು ಬೆಲೆಯೇರಿಕೆ ಮಾಡಿದ ಖ್ಯಾತಿ, ಕೀರ್ತಿ, ದಾಖಲೆ ಕಾಂಗ್ರೆಸ್ಗೆ ಸೇರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಪಿ.ಎಫ್.ಐ. ವಿದ್ಯಾರ್ಥಿಗಳ ಪ್ರತಿಭಟನೆ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಚಿಸಿರುವ ಸಮಿತಿ ಪರಾಮರ್ಶೆ ಮಾಡುತ್ತಿದ್ದು ವರದಿ ಬಂದ ಕೂಡಲೇ ತೀರ್ಮಾನ ಮಾಡಲಾಗುವುದು ಎಂದರು.
ಮುಸ್ಕಾನ್ ಅವರಿಗೆ ಅಲ್ ಖೈದಾ ಮುಖ್ಯಸ್ಥರು ನೀಡಿರುವ ಬೆಂಬಲಕ್ಕೆ ಸಂಬಂಧಿಸಿದಂತೆ ಅನಂತ ಕುಮಾರ್ ಹೆಗಡೆ ಅವರು ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆಯಾಗಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಏನಿದೆ ಎಂದು ಗೊತ್ತಿಲ್ಲ.
ಅನಂತಕುಮಾರ್ ಹೆಗಡೆ ಅವರ ಬಳಿ ಚರ್ಚೆ ಮಾಡಿ ಅವರ ಬಳಿ ಇರುವ ಮಾಹಿತಿ ಬಗ್ಗೆ ತಿಳಿದುಕೊಳ್ಳಲಾಗುವುದು. ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.