Publish Date: Fri, 08 Apr 2022 (16:40 IST)
Updated Date: Fri, 08 Apr 2022 (16:46 IST)
ಮೋಸ್ಟ್ ವಾಂಟೆಡ್ ಉಗ್ರ ಸಂಘಟನೆ ಅಲ್ ಖೈದಾ ನಾಯಕನೊಬ್ಬನ ವಿಡಿಯೋ ತುಣುಕಿನ ನಿಖರತೆ ಬಗ್ಗೆ ಪರಿಶೀಲಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹಿಜಾಬ್ ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ ದೇಶ, ರಾಜ್ಯದ ಕಾನೂನಿನ ವಿರುದ್ಧ ಅನವಶ್ಯಕವಾಗಿ ಹಲವಾರು ವಿಷಯಗಳನ್ನು ಪ್ರಾರಂಭ ಮಾಡಿ ಜನರಲ್ಲಿ ಆಶಾಂತಿ ಗೊಂದಲವನ್ನು ಮೂಡಿಸುವ ಶಕ್ತಿ ಹಿಂದಿನಿಂದಲೂ ಕೆಲಸ ಮಾಡುತ್ತಾ ಬಂದಿದೆ. ಅದರ ಭಾಗವಾಗಿ ಅಲ್ ಖೈದಾ ಸಂಘಟನೆಯಿಂದ ಎಂದು ಹೇಳಿಕೊಂಡು ವಿಡಿಯೋ ತುಣುಕಿನಲ್ಲಿ ಅಭಿಪ್ರಾಯವೊಂದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.