Publish Date: Sun, 17 Apr 2022 (11:36 IST)
Updated Date: Sun, 17 Apr 2022 (09:06 IST)
ರಾಯಚೂರು: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
40 ವರ್ಷದ ವ್ಯಕ್ತಿ ಮೃತರು. ಮನೆಯಲ್ಲಿ ಜಗಳವಾಡಿಕೊಂಡಿದ್ದು ಮನಸ್ಸಿಗೆ ಬೇಸರ ಮಾಡಿಕೊಂಡಿದ್ದ ವ್ಯಕ್ತಿ ಬೈಕ್ ನಲ್ಲಿ ಹೊರಗೆ ಬಂದಿದ್ದರು.
ಬಳಿಕ ಮನೆಯ ಸಮೀಪದ ಶಾಲೆಯೊಂದರ ಬಳಿಯಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.