Publish Date: Sat, 16 Apr 2022 (20:10 IST)
Updated Date: Sat, 16 Apr 2022 (20:12 IST)
ಎಸ್ಪಿ ಕಿರುಕುಳ ತಡೆಯೋದಿಕ್ಕೆ ಆಗ್ತಿಲ್ಲ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತುಮಕೂರು ಎಸ್ಪಿಗೆ
ವ್ಯಕ್ತಿಯೊಬ್ಬ ಬೆದರಿಕೆ ಹಾಕಿರೋ ಘಟನೆ ನಡೆದಿದೆ. ತುಮಕೂರು ಎಸ್ಪಿಯಿಂದ ಬಿಲ್ಡರ್ ಲಕ್ಷ್ಮೀಕಾಂತ ಅಲಿಯಾಸ್ ಚಂದನ್ ಗೆ ಕಿರುಕುಳ ಆರೋಪ ಕೇಳಿಬಂದಿದ್ದು , ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ವಿರುದ್ಧ ಆರೋಪ ಮಾಡಿ ಚಂದನ್ 25 ಸೆಕೆಂಡ್ ವಿಡಿಯೋ ಹರಿಬಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿದ್ದ . ಮೊಬೈಲ್ ಸ್ವೀಚ್ಡ್ ಆಫ್ ಮಾಡಿ ಮನೆಯಲ್ಲೇ ಇದ್ದ ಚಂದನ್ ನನ್ನು ತುಮಕೂರಿನ ಆದರ್ಶನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ . ಚಂದನ್ , ತುಮಕೂರು ನಗರದ ನಿವಾಸಿ ಹಾಗೂ ಬಿಲ್ಡರ್ ಆಗಿದ್ದು, ಎಸ್ಪಿ ಕಿರುಕುಳದಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತೇನೆಂದು ಚಂದನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇಲ್ಲಸಲ್ಲದ ಆರೋಪ ಹೊರಿಸಿ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಕಿರುಕುಳ ನೀಡಲಾಗ್ತಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಇನ್ನು ಎಸ್ಪಿ ವಿರುದ್ಧ ಐಜಿಗೆ ದೂರು ನೀಡಿದ್ದ ಚಂದನ್. ಆದ್ರೆ ಐಜಿ ಯಿಂದಲ್ಲೂ ನ್ಯಾಯ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾನೆ.