Publish Date: Sat, 16 Apr 2022 (19:58 IST)
Updated Date: Sat, 16 Apr 2022 (20:08 IST)
.ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯ ಸರ್ದಾರ್ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.ಉಪನ್ಯಾಸಕ ಅಮಿತ್ ಬಸವಮೂರ್ತಿಗೆ ಕಾಲೇಜಿನ ಸ್ಟಾಫ್ ರೂಮ್ನಲ್ಲಿ ಅತಿಥಿ ಉಪನ್ಯಾಸಕಿಯರು ಹಿಗ್ಗಾಮಗ್ಗಾ ಥಳಿಸಿದ್ದಾರೆ..ಉಪನ್ಯಾಸಕ ಅಮಿತ್ ನಿತ್ಯ ಕಾಲೇಜಿಗೆ ಮದ್ಯ ಸೇವಿಸಿ ಬಂದು ಸ್ಟಾಫ್ ರೂಮ್ನಲ್ಲಿ ಲೈಂಗಿಕ ಕಿರುಕುಳ ನೀಡ್ತಿದ್ದನಂತೆ. ಹಲವು ಬಾರಿ ವಾರ್ನಿಂಗ್ ಕೊಟ್ರೂ ಚಾಳಿ ಬಿಡದ ಹಿನ್ನೆಲೆ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಸ್ಟಾಫ್ ರೂಮ್ನಲ್ಲೇ ಅತಿಥಿ ಉಪನ್ಯಾಸಕಿಯರು ಚಪ್ಪಲಿ ಏಟು ನೀಡಿ ಬುದ್ಧಿ ಕಲಿಸಿದ್ದಾರೆ. ಅತಿಥಿ ಉಪನ್ಯಾಸಕಿಯರು ಥಳಿಸಿರುವ ವಿಡಿಯೋ ವೈ ರಲ್ ಆಗಿದೆ.ಉಪನ್ಯಾಸಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.