Publish Date: Sat, 16 Apr 2022 (17:28 IST)
Updated Date: Sat, 16 Apr 2022 (17:30 IST)
ಅಂಬೇಡ್ಕರ್ ಜಯಂತಿ ಫ್ಲೆಕ್ಸ್ ಹರಿದ ದುಷ್ಕರ್ಮಿಗಳನ್ನ ಬಂಧಿಸುವಂತೆ ಸ್ಥಳಿಯರು ಪ್ರೋಟೆಸ್ಟ್ ಮಾಡಿರೋ ಘಟನೆ ಕೆರೆಗೋಡಿ ರಂಗಾಪುರ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರದಲ್ಲಿ ಅಂಬೇಡ್ಕರ್ ಜಯಂತಿ ಹಿನ್ನೆಲೆ ಅಂಬೇಡ್ಕರ್ ರವರ ಫ್ಲೇಕ್ಸ್ ಅಳವಡಿಸಲಾಗಿತ್ತು ಆದ್ರೆ ದುಷ್ಕರ್ಮಿಗಳು ತಡರಾತ್ರಿ ಫ್ಲೇಕ್ಸ್ ಹರಿದು ಹಾರಿದುಹಾಕಿದ್ದಾರೆ. ಇದು ಸಂವಿಧಾನ ಶಿಲ್ಪಿಗೆ ಮಾಡಿರೋ ಅಪಮಾನ ಹೀಗಾಗಿ ಈ ದುಕೃತ್ಯ ಮಾಡಿದವರನ್ನ ಕೂಡಲೇ ಬಂಧಿಸುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದು ಫ್ಲೇಕ್ಸ್ ಮುಂದೆಯೇ ಕುಳಿತಿರುವ ಸ್ಥಳೀಯರು ಪ್ರತಿಭಟನೆಗೆ ಮಾಡಿದ್ದಾರೆ.