Select Your Language

Notifications

webdunia
webdunia
webdunia
webdunia

ಮೂರು ತಿಂಗಳ ಮಗುವನ್ನು ಏಳು ಬಾರಿ ಮಾರಿದ ದುಷ್ಕರ್ಮಿಗಳು ಅರೆಸ್ಟ್

ಮೂರು ತಿಂಗಳ ಮಗುವನ್ನು ಏಳು ಬಾರಿ ಮಾರಿದ ದುಷ್ಕರ್ಮಿಗಳು ಅರೆಸ್ಟ್
ವಿಜಯವಾಡ , ಗುರುವಾರ, 31 ಮಾರ್ಚ್ 2022 (09:30 IST)
ವಿಜಯವಾಡ: ಮೂರು ತಿಂಗಳ ಮಗುವನ್ನು ದುಷ್ಕರ್ಮಿಗಳು ಎರಡು ತಿಂಗಳ ಅವಧಿಯಲ್ಲಿ ಏಳು ಬಾರಿ ಮಾರಾಟ ಮಾಡಿದ್ದು, ಈ ಸಂಬಂಧ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ ಮಾಡುವುದೇ ಇವರ ವೃತ್ತಿಯಾಗಿತ್ತು. ಇದೇ ರೀತಿ ನವಜಾತ ಹೆಣ್ಣು ಮಗುವನ್ನು ಕೈಯಿಂದ ಕೈಗೆ ಬದಲಾಯಿಸಿ ಏಳು ಬಾರಿ ಮಾರಾಟ ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ 11 ಮಂದಿ ಭಾಗಿಯಾಗಿದ್ದಾರೆ.

ಮಗುವಿನ ತಂದೆಗೆ 70 ಸಾವಿರ ರೂ. ನೀಡಿ ಮಗು ಪಡೆದಿದ್ದ ದುಷ್ಕರ್ಮಿಗಳು ಕೊನೆಗೆ 2.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು.ಮೂರನೇ ಬಾರಿಗೆ ಹೆಣ್ಣು ಮಗುವಾಗಿದ್ದ ಕಾರಣಕ್ಕೆ ತಂದೆ ಮಗುವನ್ನು ಮಾರಾಟ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಚಾರ್ಯಗೆ ಕೊಲೆ ಬೆದರಿಕೆ !