Publish Date: Wed, 30 Mar 2022 (09:30 IST)
Updated Date: Wed, 30 Mar 2022 (09:47 IST)
ಇಂಧೋರ್: ಮಗಳ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನನ್ನು ಬಾಲಕಿಯ ತಂದೆ ಮತ್ತು ಮಾವ ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಧ‍್ಯಪ್ರದೇಶದಲ್ಲಿ ನಡೆದಿದೆ.
14 ಅಪ್ರಾಪ್ತ ಬಾಲಕಿ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯವೆಸಗಿದ್ದ. ಇದೇ ಸಿಟ್ಟಿನಲ್ಲಿ ಬಾಲಕಿಯ ತಂದೆ ಮತ್ತು ಮಾವ ಆರೋಪಿಯನ್ನು ಹಿಂಬಾಲಿಸಿ ಆತನನ್ನು ತುಂಡು ತುಂಡಾಗಿ ಕತ್ತರಿಸಿ ಮೃತದೇಹವನ್ನು ನದಿಯೊಂದಕ್ಕೆ ಎಸೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಬೇರೆಯವರ ಸಹಾಯ ಪಡೆದಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.