Publish Date: Tue, 29 Mar 2022 (10:31 IST)
Updated Date: Tue, 29 Mar 2022 (10:33 IST)
ಬೆಂಗಳೂರು: ಮೋಜಿನ ಜೀವನದ ಆಸೆಗೆ ಮನೆಗಳ್ಳತನ ಮಾಡುತ್ತಿದ್ದ ಖದೀಮ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹಲವು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯಿಂದ ಚಿನ್ನ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಇಮ್ರಾನ್ ಖಾನ್ ಬೀಗ ಹಾಕಿದ್ದ ಮನೆಗೆ ಕನ್ನ ಹಾಕುತ್ತಿದ್ದ.
ಬಳಿಕ ಬಂದ ಹಣದಲ್ಲಿ ಪತ್ನಿ ಜೊತೆ ವಿದೇಶ ಪ್ರವಾಸ ಎಂದು ಮೋಜು ಮಸ್ತಿ ಮಾಡುತ್ತಿದ್ದ. ಇದೀಗ ಗೋವಿಂದರಾಜನಗರ ಪೊಲೀಸರು ಈತನನ್ನು ಬಂಧಿಸಿದ್ದಾರೆ.