Select Your Language

Notifications

webdunia
webdunia
webdunia
webdunia

ಪಾಳು ಬಿದ್ದಿದ್ದ ಅಂಗಡಿಯಲ್ಲಿ ಸಿಕ್ತು ಮನುಷ್ಯನ ಅಂಗಾಂಗಗಳು!

ಪಾಳು ಬಿದ್ದಿದ್ದ ಅಂಗಡಿಯಲ್ಲಿ ಸಿಕ್ತು ಮನುಷ್ಯನ ಅಂಗಾಂಗಗಳು!
ನಾಸಿಕ್ , ಮಂಗಳವಾರ, 29 ಮಾರ್ಚ್ 2022 (10:00 IST)
ನಾಸಿಕ್:  ಮುಚ್ಚಿದ್ದ ಅಂಗಡಿಯೊಂದರ ಬೇಸ್ ಮೆಂಟ್ ನಲ್ಲಿ ಮನುಷ್ಯನ ತುಂಡಾದ ಕಿವಿ, ಕಣ್ಣು ಸೇರಿದಂತೆ ದೇಹದ ಅಂಗಾಂಗಳು ಕಂಟೈನರ್ ಒಂದರಲ್ಲಿ ಪತ್ತೆಯಾಗಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಸಿಕ್ ನಲ್ಲಿ.

ಪಾಳು ಬಿದ್ದ ಅಂಗಡಿಯಿಂದ ವಿಪರೀತ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಬಂದು ಪರಿಶೀಲಿಸಿದಾಗ ಮನುಷ್ಯನ ಅವಯವಗಳ ಅವಶೇಷ ಸಿಕ್ಕಿದೆ.

ಇದೀಗ ಅಂಗಾಂಗಗಳನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾಗಿದ್ದರೂ ಈ ಅಂಗಾಂಗಗಳ ಮೂಲ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕ ನೆರವು : ಭಾರತಕ್ಕೆ ಧನ್ಯವಾದ ಸಲ್ಲಿಸಿದ ಶ್ರೀಲಂಕಾ