Select Your Language

Notifications

webdunia
webdunia
webdunia
webdunia

ಸರ್ಕಾರಿ ನೌಕರರ ದುರ್ನಡತೆ ತನಿಖೆ ಹಾಗೂ ಶಿಸ್ತುಕ್ರಮಕ್ಕೆ ಸರ್ಕಾರ ಆದೇಶ

Crime
ಸರ್ಕಾರಿ ನೌಕರರ ಮೇಲಿನ ದುರ್ನಡತೆ ಆರೋಪದ ಸಂಬಂಧ ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. ಶಿಸ್ತುಕ್ರಮ ಆರಂಭಿಸಿ ಕಾಲಮಿತಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಲಾಖಾ ವಿಚಾರಣೆ ಅದಾಲತ್ ನಡೆಸು ವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ನೌಕರರ ಮೇಲಿನ ಇಲಾಖಾ ವಿಚಾರಣೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಸರ್ಕಾರಿ ಕೆಲಸಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಒಂದು ದಿನ ಇಲಾಖಾ ವಿಚಾರಣೆ ಅದಾಲತ್ ನಡೆಸುವಂತೆ ಆದೇಶಿಸಿದ್ದು, ಹಲವು ಸೂಚನೆಗಳ ನಂತರವೂ ವಿಚಾರಣೆಗೆ ಹಾಜರಾಗದ ನೌಕರನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಬಿ ಟ್ಯಾಂಕ್ ಬಳಸಿ ಪೆಟ್ರೋಲ್ ಕಳ್ಳತನ ಸಚಿವ ಉಮೇಶ್ ಕತ್ತಿ ಗರಂ