ಚಂಡೀಘಡ: ದುಬಾರಿ ಗಿಫ್ಟ್ ಕಳುಹಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಸ್ನೇಹಿತನೇ 5.10 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ಫೇಸ್ ಬುಕ್ ಮುಖಾಂತರ ಮಹಿಳೆಗೆ ಆರೋಪಿಯ ಸ್ನೇಹವಾಗಿತ್ತು. ತಾನು ಇಂಗ್ಲೆಂಡ್ ನಲ್ಲಿ ವಾಸಿಸುವುದಾಗಿ ಮಹಿಳೆಯನ್ನು ನಂಬಿಸಿದ್ದ. ಇಂಗ್ಲೆಂಡ್ ನಿಂದ ದುಬಾರಿ ಗಿಫ್ಟ್ ಕಳುಹಿಸುತ್ತೇನೆ. ಕಸ್ಟಮ್ಸ್ ಸುಂಕ ಪಾವತಿಸಲು ಹಣ ಬೇಕೆಂದು ಮಹಿಳೆಯಿಂದ 5.10 ಲಕ್ಷ ರೂ. ವಸೂಲಿ ಮಾಡಿದ್ದ.
ಹಣ ಸಿಕ್ಕಿದ ಬಳಿಕ ಅತ್ತ ಗಿಫ್ಟ್ ಇಲ್ಲ, ಅಸಾಮಿಯ ಕರೆಯೂ ಇರಲಿಲ್ಲ. ಮಹಿಳೆ ಕರೆ ಮಾಡಿದರೆ ಪ್ರತಿಕ್ರಿಯೆಯೂ ಇರಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೇ ಮಹಿಳೆ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.