Select Your Language

Notifications

webdunia
webdunia
webdunia
webdunia

ಮದುವೆ ತಪ್ಪಿಸಿಕೊಳ್ಳಲೆತ್ನಿಸಿದ ವರ: ಪೊಲೀಸರ ಸಮ್ಮುಖದಲ್ಲಿ ತಡರಾತ್ರಿ ನಡೆದ ಮದುವೆ

ಮದುವೆ ತಪ್ಪಿಸಿಕೊಳ್ಳಲೆತ್ನಿಸಿದ ವರ: ಪೊಲೀಸರ ಸಮ್ಮುಖದಲ್ಲಿ ತಡರಾತ್ರಿ ನಡೆದ ಮದುವೆ
ಪಾಟ್ನಾ , ಸೋಮವಾರ, 28 ಮಾರ್ಚ್ 2022 (09:30 IST)
ಪಾಟ್ನಾ: ಮದುವೆ ಮಾಡಿಕೊಳ್ಳಲು ಆ ವರನಿಗೆ ಅದೇಕೆ ಹಿಂಜರಿಕೆಯಿತ್ತೋ. ಆದರೆ ವಧುವಿನ ಮನೆಯವರು ಪೊಲೀಸರಿಗೆ ದೂರು ನೀಡಿ ಕೊನೆಗೆ ಅವರ ಸಮ್ಮುಖದಲ್ಲೇ ತಡರಾತ್ರಿ ಮದುವೆ ಕಾರ್ಯಕ್ರಮ ನಡೆಯಿತು.

ಕಳೆದ ವರ್ಷ ಈ ಜೋಡಿಯ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ದಿನ ವರ ನಾಪತ್ತೆಯಾಗಿದ್ದ. ಬಳಿಕ ವಧುವಿನ ಮನೆಯವರು ಪೊಲೀಸರ ಮೊರೆ ಹೋಗಿದ್ದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು ಮಾರ್ಚ್ 25 ರಂದು ಮದುವೆ ನಿಗದಿಯಾಗಿತ್ತು.

ಆದರೆ ಈ ಬಾರಿಯೂ ವರ ಮತ್ತೆ ನಾಪತ್ತೆಯಾಗಿದ್ದ. ಇದರಿಂದ ಬೇಸತ್ತ ವಧುವಿನ ಕುಟುಂಬ ಮತ್ತೆ ಪೊಲೀಸರ ಮೊರೆ ಹೋಗಿದೆ. ಪೊಲೀಸರು ವರನನ್ನು ಹುಡುಕಿ ತಂದು ತಮ್ಮ ಸಮ್ಮುಖದಲ್ಲೇ ರಾತ್ರೋ ರಾತ್ರಿ ಮದುವೆ ಮಾಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಟಿನ್ ಓರ್ವ ಕಟುಕ: ಜೋ ಬೈಡೆನ್