Publish Date: Sun, 27 Mar 2022 (09:53 IST)
Updated Date: Sun, 27 Mar 2022 (09:55 IST)
ಪಾಟ್ನಾ: ಬಾಲ್ಯದಿಂದಲೂ ಪರಸ್ಪರ ಸ್ನೇಹದಿಂದಿದ್ದು, ಬಳಿಕ ಪ್ರೀತಿ ಮಾಡುತ್ತಿದ್ದ ಯುವ ಜೋಡಿ ಕ್ಷುಲ್ಲುಕ ಕಾರಣಕ್ಕೆ ಫೋನ್ ನಲ್ಲಿ ಕಿತ್ತಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಮ್ಮ ತಮ್ಮ ಕೆಲಸದ ನಿಮಿತ್ತ ಇಬ್ಬರೂ ಬೇರೆ ಬೇರೆ ಊರಿನಲ್ಲಿದ್ದರೂ ಪರಸ್ಪರ ಫೋನ್ ಮುಖೇನ ಸಂಪರ್ಕದಲ್ಲಿದ್ದರು. ಇದೀಗ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಇದನ್ನು ಪರಿಹರಿಸಲು ಇವರ ಸ್ನೇಹಿತರು ಯತ್ನಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ.
ಇದೇ ಸಿಟ್ಟಿನಲ್ಲಿ ಮೊದಲು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಿಗ್ಗೆ ಹೊತ್ತು ತನ್ನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಯುವಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.