Publish Date: Sat, 26 Mar 2022 (10:20 IST)
Updated Date: Sat, 26 Mar 2022 (10:30 IST)
ಮುಂಬೈ: ಕುಡಿದು ಬಂದು ಪ್ರತಿನಿತ್ಯ ಅಮ್ಮನಿಗೆ ಹಿಂಸೆ ನೀಡುತ್ತಿದ್ದ ತಂದೆಯನ್ನು 16 ವರ್ಷದ ಮಗ ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
46 ವರ್ಷದ ವ್ಯಕ್ತಿ ಕೊಲೆಗೀಡಾಗಿದ್ದಾರೆ. ರಾತ್ರಿ ಊಟಕ್ಕೆ ಕೂತಿದ್ದಾಗ ಅಮ್ಮನ ಮೇಲೆ ತಂದೆ ಹಲ್ಲೆ ನಡೆಸುತ್ತಿರುವುದು ನೋಡಿ ಮಗನಿಗೆ ಸಿಟ್ಟು ಬಂದಿತ್ತು. ಇದನ್ನು ತಡೆಯಲು ಹೋಗಿದ್ದಕ್ಕೆ ಮಗನಿಗೂ ಹೊಡೆಯಲು ತಂದೆ ಮುಂದಾಗಿದ್ದ.
ಬಳಿಕ ಮಗನನ್ನು ತಳ್ಳಿ ತಾಯಿಯ ತಲೆ ಗೋಡೆಗೆ ಚಚ್ಚುತ್ತಿದ್ದ. ಆತನಿಂದ ತಾಯಿಯನ್ನು ಬಿಡಿಸಲು ಮಗ ಸುತ್ತಿಗೆಯಿಂದ ಹೊಡೆದಿದ್ದಾನೆ. ಪರಿಣಾಮ ತಂದೆ ಸಾವನ್ನಪ್ಪಿದ್ದಾನೆ. ಪೊಲೀಸರು ಈಗ ಮಗನನ್ನು ಬಂಧಿಸಿದ್ದಾರೆ.