Select Your Language

Notifications

webdunia
webdunia
webdunia
webdunia

ಶಾಲಾ ಆವರಣದಲ್ಲಿ ಬಾಲಕಿ ಮೇಲೆ ಅತ್ಯಾಚಾರ

ಶಾಲಾ ಆವರಣದಲ್ಲಿ ಬಾಲಕಿ ಮೇಲೆ ಅತ್ಯಾಚಾರ
ಪುಣೆ , ಶನಿವಾರ, 26 ಮಾರ್ಚ್ 2022 (09:40 IST)
ಪುಣೆ: 11 ವರ್ಷದ ಬಾಲಕಿ ಮೇಲೆ ಶಾಲಾ ಆವರಣದಲ್ಲೇ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಾಲೆಗೆ ಪ್ರತಿನಿತ್ಯ ಕೊಂಚ ಬೇಗನೇ ಬರುತ್ತಿದ್ದ ಬಾಲಕಿಯನ್ನು ದುಷ್ಕರ್ಮಿ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದ. ತನ್ನ ಮೇಲಾದ ಅತ್ಯಾಚರದ ಬಗ್ಗೆ ಬಾಲಕಿ ಸ್ನೇಹಿತರಿಗೆ ಹೇಳಿದ್ದರು. ಅವರು ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು.

ಬಳಿಕ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಆರೋಪಿಗಳು ಸಂತ್ರಸ್ತೆಯ ತಂದೆಯ ಜೊತೆಯೇ ಕೆಲಸ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ. ವೈಯಕ್ತಿಕ ಧ್ವೇಷದ ಹಿನ್ನಲೆಯಲ್ಲಿ ಈ ರೀತಿ ಸೇಡು ತೀರಿಸಿಕೊಂಡಿರುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದಿಂದ ಮೀಸಲಾತಿ ಹೆಚ್ಚಳ