ತಿರುವನಂತಪುರಂ: ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡನನ್ನು ಸಹೋದರನನ್ನು ಕೊಂದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
27 ವರ್ಷದ ಬಾಬು ಎಂಬಾತನನ್ನು ಸಹೋದರ ಸಾಬು ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಮನೆಯ ಸಮೀಪವೇ ಮಣ್ಣಿನಡಿಯಲ್ಲಿ ಹೂತು ಹಾಕಿದ್ದ. ಇದನ್ನು ಸ್ಥಳೀಯರೊಬ್ಬರು ಗಮನಿಸಿದ್ದರು. ಬಳಿಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಸಹೋದರನನ್ನು ಪ್ರಶ್ನಿಸಿದಾಗ ಆತನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸಾಬು ಕುಡಿದು ಮನೆಗೆ ಬಂದು ದಾಂಧಲೆ ಮಾಡಿದ್ದನ್ನು ಸಹೋದರ ಬಾಬು ಅದನ್ನು ಪ್ರಶ್ನಿಸಿದ್ದ. ಈ ವೇಳೆ ಆರೋಪಿ ಗಾಜಿನ ಚೂರಿನಿಂದ ಇರಿಯಲು ಯತ್ನಿಸಿದ್ದಾನೆ. ಇಬ್ಬರ ನಡುವೆ ಕಿತ್ತಾಟವಾಗಿ ಕೆಸರಿನ ಗುಂಡಿಯೊಕ್ಕೆ ಬಿದ್ದಿದ್ದಾರೆ. ಈ ವೇಳೆ ಸಹೋದರನನ್ನು ಆರೋಪಿ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.