Publish Date: Fri, 25 Mar 2022 (10:10 IST)
Updated Date: Fri, 25 Mar 2022 (10:35 IST)
ಮುಂಬೈ : ಮಾತುಬಾರದ ಬಾಲಕನನ್ನು ಕೊಂದು ಗೋಣಿ ಚೀಲದೊಳಗೆ ತುಂಬಿ ಬಿಸಾಕಿರುವ ಘಟನೆ ಪುಣೆಯಲ್ಲಿ ನಡೆದಿದೆ.
13 ವರ್ಷದ ಬಾಲಕ ಮೃತನಾಗಿದ್ದಾನೆ. ಈತನಿಗೆ ಮಾತು ಬರುತ್ತಿರಲಿಲ್ಲ. ಬಾಲಕನನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಎಸೆದಿದ್ದು, ಕೊತ್ರುದ್ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಇದೊಂದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಸ್ಥಳಕ್ಕೆ ಕೊತ್ರುಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಣಿ ಚೀಲದಲ್ಲಿ ಶವ ಪತ್ತೆಯಾಗಿದೆ ಕೊತ್ರೂಡ್ನ ಪೌಡ್ ರೋಡ್ ಪ್ರದೇಶದ ಕಾಲೇಜಿನ ಹಿಂಭಾಗದಲ್ಲಿ ಬ್ಯಾಗ್ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.