Select Your Language

Notifications

webdunia
webdunia
webdunia
webdunia

ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಆಟೋ ಚಾಲಕನ ಕೊಲೆ

Auto driver's murder: cement bricks lifted
bangalore , ಮಂಗಳವಾರ, 15 ಮಾರ್ಚ್ 2022 (19:10 IST)
ಬೆಂಗಳೂರು: ಆಟೋ ಚಾಲಕನನ್ನು ಅಟ್ಟಾಡಿಸಿ ಕಲ್ಲಿನಿಂದ ಹೊಡೆದು ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಜೀವನ್ ಭೀಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಬೆಳಗಿನ ಜಾವ ನಡೆದಿರುವುದು ಬೆಳಕಿಗೆ ಬಂದಿದೆ.
 
ದೂಪನಹಳ್ಳಿ ನಿವಾಸಿ ಮಂಜುನಾಥ್(32) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಜೆಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಿಡಿ ಬಾರ್ ಬಳಿ  ಮಂಜುನಾಥ ಹಾಗೂ ಆರೋಪಿಗಳ ನಡುವೆ ನಿನ್ನೆ ತಡ ರಾತ್ರಿ ಕುಲ್ಲಕ ವಿಚಾರವಾಗಿ ಜಗಳ ಪ್ರಾರಂಭವಾಗಿತ್ತು. ಆ ಸಂದರ್ಭದಲ್ಲಿ ಮಂಜುನಾಥ ಬಾರ್‌ನಿಂದ ಹೊರಗೆ ಬಂದು ಆಟೋದೊಳಗೆ ಕುಳಿತುಕೊಂಡಿದ್ದಾಗ ಆರೋಪಿ ಗಳು ಮತ್ತೆ ಅಲ್ಲಿಗೂ ಬಂದು ಗಲಾಟೆ ಮಾಡಿದ್ದರು ಎಂದು ಪ್ರಕರಣದ ಕುರಿತು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
 
ಬೆಳಗಿನ ಜಾವ ಸುಮಾರು 1.30ರ ಸುಮಾರಿನಲ್ಲಿ ಆಟೋದಿಂದ ಇಳಿದು ಮಂಜುನಾಥ್‌ ಓಡಿ ಹೋಗುತ್ತಿದ್ದಾಗ ಆರೋಪಿಗಳು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಕೋಡಿಹಳ್ಳಿ ಜಂಕ್ಷನ್ ಬಳಿ ಕೆಳಗೆ ಬಿದ್ದ ಮಂಜುನಾಥ್ ತಲೆಗೆ ಕಲ್ಲಿನಿಂದ ಹೊಡೆದು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದಿದ್ದಾರೆ.
 
ಅರೋಪಿಗಳಿಗಾಗಿ ಶೋಧ:
 
ಸುದ್ದಿ ತಿಳಿದ ತಕ್ಷಣ ಜೆಬಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ. ಆರೋಪಿಗಳು ಕೊಲೆ ನೆಡಸಿ ರಸ್ತೆ ಅಫಘಾತವಾದಂತೆ ಬಿಂಬಿಸಲು ಯತ್ನಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ವಿರುದ್ಧ ಹೈಕೋರ್ಟ್ ನ ತೀರ್ಪು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿ