Select Your Language

Notifications

webdunia
webdunia
webdunia
webdunia

ನರ್ಸ್ ಹಾಗೂ ಆಶಾ ಕಾರ್ಯಕರ್ತರ ಕೆಲಸಕ್ಕೆ ಸಂತಸವಿದೆ ಎಂದ ಡಾಕ್ಟರ್ ಕೆ ಸುಧಾಕರ್

ನರ್ಸ್ ಹಾಗೂ ಆಶಾ ಕಾರ್ಯಕರ್ತರ ಕೆಲಸಕ್ಕೆ ಸಂತಸವಿದೆ   ಎಂದ ಡಾಕ್ಟರ್ ಕೆ ಸುಧಾಕರ್
ಬೆಂಗಳೂರು , ಮಂಗಳವಾರ, 15 ಮಾರ್ಚ್ 2022 (15:50 IST)
ಸಮಾಜ ಅಭಿವೃದ್ಧಿ ಕಾಣಲು ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
 
ಎಫ್ ಕೆಸಿಸಿಐ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಸಚಿವರು, ಮಹಿಳೆ ಬಾಲ್ಯದಿಂದಲೇ ಹೋರಾಟವನ್ನು ಆರಂಭಿಸಬೇಕಾಗುತ್ತದೆ.
ಕುಟುಂಬದಲ್ಲೂ ಹಕ್ಕುಗಳಿಗಾಗಿ ಹೋರಾಟ, ಸಮಾಜದಲ್ಲಿ ಲಿಂಗ ಸಮಾನತೆಗಾಗಿ ಹೋರಾಟ, ಹೀಗೆ ಮಹಿಳೆಯ ಹೋರಾಟ ನಿರಂತರವಾಗಿರುತ್ತದೆ. ಆದರೆ ಯಾವುದೇ ಸಮಾಜ ಸಂಪೂರ್ಣ ಅಭಿವೃದ್ಧಿ ಕಾಣಬೇಕೆಂದರೆ ಮಹಿಳೆಯರಿಗೆ ಸಂಪೂರ್ಣ ಅವಕಾಶ, ಹಕ್ಕುಗಳನ್ನು ನೀಡಬೇಕಾಗುತ್ತದೆ ಎಂದರು.
 
ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ಬಚಾವೋ, ಭೇಟಿ ಪಡಾವೋ ಕಾರ್ಯಕ್ರಮ ಆರಂಭಿಸಿದರು. ಇದರ ಜೊತೆಗೆ ಭೇಟಾ ಸಮ್ಜಾವೋ ಎಂಬುದನ್ನೂ ಸೇರಿಸಲಾಯಿತು. ಇದು ಲಿಂಗ ಅಸಮಾನತೆ ನಿವಾರಿಸಲು ನೆರವಾಗಿದೆ. 2015-16 ರಲ್ಲಿ ಮಹಿಳೆಯರ ಸಂಖ್ಯೆ (1,000 ಪುರುಷರಿಗೆ) 840 ಇತ್ತು. 2020 ರಲ್ಲಿ ಈ ಸಂಖ್ಯೆ 1,040-1,050 ಆಗಿದೆ. ಅಂದರೆ ಈ ಐದು ವರ್ಷಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದು ದೇಶ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈಗ ರಾಜ್ಯದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಿದೆ. ಮಹಿಳಾ ನವೋದ್ಯಮಗಳು ಕಂಡುಬರುತ್ತಿದ್ದರೂ, ಅತಿ ಕಡಿಮೆ ಪ್ರಮಾಣದಲ್ಲಿವೆ. ಇದರಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಸಿಎಂ ಶ್ರೀಕಂಠೇಗೌಡ ರಂತೆ