Select Your Language

Notifications

webdunia
webdunia
webdunia
webdunia

ತಂದೆಯಿಂದಲೇ ಐವರು ಮಕ್ಕಳ ಕೊಲೆ!

ತಂದೆಯಿಂದಲೇ ಐವರು ಮಕ್ಕಳ ಕೊಲೆ!
ಕ್ಯಾಲಿಫೋರ್ನಿಯಾ , ಗುರುವಾರ, 3 ಮಾರ್ಚ್ 2022 (12:27 IST)
ಕ್ಯಾಲಿಫೋರ್ನಿಯಾ : ಮೂರು ಮಕ್ಕಳನ್ನು ತಂದೆಯೇ ಗುಂಡಿಕ್ಕಿ ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯುಎಸ್ ಚರ್ಚ್ನಲ್ಲಿ ನಡೆದಿದೆ.
 
ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದನೇ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ. ಆದರೆ ಆ ವ್ಯಕ್ತಿಯು ಆ ಮನೆಗೆ ಸಂಬಂಧಿಸಿದ ವ್ಯಕ್ತಿಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮೂವರು ಮಕ್ಕಳು 15 ವರ್ಷದ ಕೆಳಗಿನವರಾಗಿದ್ದಾರೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಸಾಜೆರ್ಂಟ್ ರಾಡ್ ಗ್ರಾಸ್ಮನ್ ತಿಳಿಸಿದರು. 

ಚರ್ಚ್ನಲ್ಲಿ ಈ ಕೃತ್ಯ ನಡೆದಿದ್ದು, ಈ ಬಗ್ಗೆ ಸ್ಥಳೀಯರಿಂದ ಕರೆಬಂದಿದೆ. ಮೂರು ಗಂಡು ಮಕ್ಕಳ ಮೃತದೇಹವನ್ನು ಈಗಾಗಲೇ ಪರಿಶೀಲಿಸಲಾಗಿದೆ. ನಗರದ ಆರ್ಡೆನ್ ಆರ್ಕೇಡ್ ಪ್ರದೇಶದ ಚರ್ಚ್ ಆಫ್ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮತ್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹಣ ವಾಪಸ್ ಕೇಳಿದ್ದೇ ತಪ್ಪಾಯ್ತ! ಮುಂದೇನಾಯ್ತು?