Publish Date: Wed, 02 Mar 2022 (09:50 IST)
Updated Date: Wed, 02 Mar 2022 (09:57 IST)
ಲಕ್ನೋ: ಹೆಚ್ಚು ಸಮಯ ಚ್ಯಾಟ್ ಮಾಡುತ್ತಲೇ ಕಾಲ ಕಳೆಯುತ್ತಾಳೆ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಪತಿ, ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ಪತ್ನಿ ಮೇಲೆ ಆಕ್ರೋಶಗೊಂಡ ಪತಿ ಸೀರೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.
ಪತ್ನಿ ಸದಾ ಬೇರೆಯವರ ಜೊತೆ ಚ್ಯಾಟ್ ಮಾಡುತ್ತಿರುತ್ತಾಳೆ. ಫೋನ್ ಕಟ್ ಮಾಡಲ ಬಂದರೆ ಜಗಳವಾಡುತ್ತಾಳೆ. ಈ ಹಿನ್ನಲೆಯಲ್ಲಿ ಕೃತ್ಯವೆಸಗಿರುವುದಾಗಿ ಪತಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.