Publish Date: Tue, 01 Mar 2022 (10:02 IST)
Updated Date: Tue, 01 Mar 2022 (10:05 IST)
ಹೈದರಾಬಾದ್: 15 ರ ಅಪ್ರಾಪ್ತ ಬಾಲಕಿ ಮೇಲೆ ತೆಲಂಗಾಣದ ರಾಜಕೀಯ ನಾಯಕನೊಬ್ಬ ಅತ್ಯಾಚಾರವೆಸಗಿದ ಘಟನೆ ನಡೆದಿದೆ.
ಟಿಆರ್ ಎಸ್ ಪಕ್ಷದ ಮುನ್ಸಿಪಲ್ ಕೌನ್ಸಿಲ್ ಸಾಜಿದ್ ಖಾನ್ ಆರೋಪಿ. ಫೆಬ್ರವರಿ 26 ರಂದು ದೂರು ದಾಖಲಾಗಿದ್ದು, ಆರೋಪಿ ವಿರುದ್ಧ ಫೋಕ್ಸೋ ಖಾಯಿದೆಯಡಿ ದೂರು ದಾಖಲಿಸಲಾಗಿದೆ.
ಸಮಾರಂಭವೊಂದರಲ್ಲಿ ಭಾಗಿಯಾಗುವ ನೆಪದಲ್ಲಿ ಬಾಲಕಿಯನ್ನು ಕಾರಿನಲ್ಲಿ ಹೈದರಾಬಾದ್ ಗೆ ಕರೆದೊಯ್ದಿದ್ದ ಆರೋಪಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಇಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ. ಈ ಸಂಬಂಧ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.