Publish Date: Tue, 01 Mar 2022 (08:58 IST)
Updated Date: Tue, 01 Mar 2022 (09:01 IST)
ಮಂಗಳೂರು: ಟೂತ್ ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣ ಹಾಕಿ ಬ್ರಷ್ ಮಾಡಿದ ಯುವತಿ ಸಾವನ್ನಪ್ಪಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ 22 ವರ್ಷದ ಯುವತಿ ಶ್ರಾವ್ಯ ಸಾವನ್ನಪ್ಪಿದವಳು. ಮನೆಯ ಬಾತ್ ರೂಂನಲ್ಲಿ ಇಲಿಗೆ ಹಾಕುವ ವಿಷ ಮತ್ತು ಟೂತ್ ಪೇಸ್ಟ್ ಒಟ್ಟಿಗೇ ಇಡಲಾಗಿತ್ತು. ಇಲಿ ಪಾಷಾಣವನ್ನು ಟೂತ್ ಪೇಸ್ಟ್ ಎಂದು ಭಾವಿಸಿ ಹಲ್ಲುಜ್ಜಿದ ಬಳಿಕ ಇದು ಪೇಸ್ಟ್ ಅಲ್ಲವೆಂದು ಯುವತಿಗೆ ಗೊತ್ತಾಗಿದೆ.
ಅಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.