Publish Date: Wed, 02 Mar 2022 (11:43 IST)
Updated Date: Wed, 02 Mar 2022 (09:26 IST)
ಮುಂಬೈ: ಗೆಳೆಯನ ಜೊತೆ ಕಿತ್ತಾಡಿದ ಎಂಬ ಕಾರಣಕ್ಕೆ 30 ವರ್ಷದ ವ್ಯಕ್ತಿಯೊಬ್ಬ ತನ್ನ ಸಹೋದರನನ್ನೇ ಇರಿದು ಕೊಂದ ಘಟನೆ ಮುಂಬೈನಲ್ಲಿ ನಡೆದಿದೆ.
ತನ್ನ ಗೆಳೆಯನ ಜೊತೆ ಕಿತ್ತಾಡಿದ್ದಕ್ಕೆ ಸಹೋದರನ ಮೇಲೆ ಆರೋಪಿಗೆ ಸಿಟ್ಟಿತ್ತು. ಇದೇ ಸಿಟ್ಟಿನಲ್ಲಿ ಚಾಕುವಿನಿಂದ ಸಹೋದರನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.