Publish Date: Thu, 03 Mar 2022 (10:10 IST)
Updated Date: Thu, 03 Mar 2022 (10:13 IST)
ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಜಗಳವಾಗಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
45 ವರ್ಷದ ಮೋಹನ್ ಎಂಬಾತ ಕೊಲೆಗೀಡಾತ. ಈತ ಮತ್ತು ಇತರ ನಾಲ್ವರು ಸ್ನೇಹಿತರ ನಡುವೆ ಸಣ್ಣ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಇದೇ ತಾರಕ್ಕಕೇರಿ ಸ್ನೇಹಿತರು ಮೋಹನ್ ಗೆ ಹೊಡೆದಿದ್ದಾರೆ. ಇದರಿಂದಾಗಿ ಗಂಭೀರ ಗಾಯಗೊಂಡ ಮೋಹನ್ ಸಾವನ್ನಪ್ಪಿದ್ದಾನೆ.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ.