Publish Date: Sun, 27 Mar 2022 (09:35 IST)
Updated Date: Sun, 27 Mar 2022 (09:44 IST)
ನವದೆಹಲಿ: ಮನೆಗೆ ತೆರಳಲು ಆಟೋ ಹತ್ತಿದ್ದ ಮಹಿಳೆ ಮೇಲೆ ಚಾಲಕ ಮತ್ತು ಆತನ ಸ್ನೇಹಿತ ಅತ್ಯಾಚಾರವೆಸಗಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಈ ಸಂಬಂಧ ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲಸ ಮುಗಿಸಿ ಮನೆಗೆ ಮರಳಲು ಮಹಿಳೆ ಆಟೋ ಹತ್ತಿದ್ದಳು. ದಾರಿ ಮಧ್ಯೆ ಪೆಟ್ರೋಲ್ ಖಾಲಿಯಾಯಿತೆಂದು ಆಟೋ ನಿಲ್ಲಿಸಿದ್ದ ಚಾಲಕ ತನ್ನ ಸಹಚರನಿಗೆ ಕರೆ ಮಾಡಿದ್ದ. ಆತ ಬಂದ ಬಳಿಕ ಮಹಿಳೆಯನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಇಬ್ಬರೂ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.