Publish Date: Sun, 27 Mar 2022 (08:11 IST)
Updated Date: Sat, 26 Mar 2022 (20:16 IST)
ಲಕ್ನೋ : ಅಪರಾಧ ಪ್ರಕರಣಗಳಲ್ಲಿ ಆಗಾಗ್ಗೆ ಸದ್ದು ಮಾಡುತ್ತಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಇಲ್ಲಿನ ಮುಜಾಫರ್ನಗರದಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯ ಗಂಡನನ್ನು ಹಿಡಿದು, ಮರಕ್ಕೆ ಕಟ್ಟಿಹಾಕಿ ಆತನ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಂಗಳವಾರ ಹೊಸ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣವು ಈಚೆಗಷ್ಟೇ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪೊಲೀಸರು, ವ್ಯಕ್ತಿ ತನ್ನ ಪತ್ನಿಯನ್ನು ಆಕೆಯ ತಾಯಿಯ ಮನೆಯಿಂದ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಮಹಿಳೆಯನ್ನು ಮಾವಿನ ತೋಟಕ್ಕೆ ಎಳೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಾಲ್ವರು ಪುರುಷರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಉಳಿದ ಆರೋಪಿಗಳು ಆಕೆಯ ಗಂಡನ ಬಳಿ ನಿಂತಿದ್ದರು. ಇದಾದ ಬಳಿಕ ಯಾರಿಗೂ ಈ ವಿಷಯ ತಿಳಿಸದಂತೆ ದಂಪತಿಗೆ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.