Publish Date: Sat, 26 Mar 2022 (10:30 IST)
Updated Date: Sat, 26 Mar 2022 (10:38 IST)
ಭುವನೇಶ್ವರ: ಬಹಿರ್ದೆಸೆಗೆ ಹೋಗಿದ್ದ 8 ವರ್ಷದ ಬಾಲಕಿಯ ತಲೆ ಕತ್ತರಿಸಿದ ಆರೋಪಿ ರುಂಡ ಹಿಡಿದು ಮನೆಗೇ ಹೋದ ಘಟನೆ ನಡೆದಿದೆ.
ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನು ನೋಡಿದ ಆರೋಪಿ ಕೊಡಲಿಯಿಂದ ಆಕೆಯ ತಲೆ ಕತ್ತರಿಸಿ ಕೊಲೆ ಮಾಡಿದ್ದ. ಬಳಿಕ ರುಂಡ ಹಿಡಿದುಕೊಂಡು ತನ್ನ ಮನೆಗೆ ಹೋಗಿದ್ದ.
ಕೈಯಲ್ಲಿ ರುಂಡ ನೋಡಿ ಆತನ ಹೆಂಡತಿ ಪ್ರಶ್ನೆ ಮಾಡಿದ್ದಳು. ಆಗ ಹೆಂಡತಿಗೂ ಬೆದರಿಕೆ ಹಾಕಿದ್ದ. ಈ ಆರೋಪಿ ಮಾದಕ ವಸ್ತು ವ್ಯಸನಿ ಎನ್ನಲಾಗಿದ್ದು, ಕೊಲೆಯಾದ ಬಾಲಕಿ ಕುಟುಂಬದವರ ಜೊತೆ ವೈಮನಸ್ಯವಿತ್ತು ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.