Select Your Language

Notifications

webdunia
webdunia
webdunia
webdunia

ಆತ್ಮಹತ್ಯೆ ಕೇಸ್​​​ಗೆ ಸ್ಫೊಟಕ ಟ್ವಿಸ್ಟ್​

Explosive Twist to Suicide Case
bangalore , ಶನಿವಾರ, 16 ಏಪ್ರಿಲ್ 2022 (16:38 IST)
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಬೇರೆ ಬೇರೆ ಆಯಾಮ ಪಡೆದಿದೆ. ಸಂತೋಷ್ ಓಡಾಡಿದ ಸ್ಥಳಗಳಲ್ಲಿ ಖಾಕಿ ಮಹಜರು ನಡೆಸಿದ್ದು, ತನಿಖೆ ತೀವ್ರಗೊಂಡಿದೆ..ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದೆ..ಸಂತೋಷ್ ಮೃತದೇಹ ಪತ್ತೆಯಾಗಿದ್ದ ಲಾಡ್ಜ್‌ನಲ್ಲಿ ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಸಂತೋಷ್ ಇದನ್ನು ಸೇವಿಸಿದ್ರಾ ಎಂಬ ಅನುಮಾನ ಮೂಡಿಸಿದೆ..ಉಡುಪಿಯ ಲಾಡ್ಜ್‌ಗೆ ಬರುವ ಮುನ್ನ ಸಂತೋಷ್ ಚಿಕ್ಕಮಗಳೂರಿನಿಂದ ವಿಷ ಖರೀದಿಸಿ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.. ಆತ್ಮಹತ್ಯೆ ಪ್ರಕರಣ ಬೇಧಿಸಲು ಪೊಲೀಸರು 5 ತಂಡ​ಗ​ಳನ್ನು ರಚಿ​ಸಿ​ದ್ದಾ​ರೆ. ಉಡುಪಿಗೆ ಬರುವ ಮೊದಲು ಚಿಕ್ಕಮಗಳೂರು & ದಾವಣಗೆರೆಗೆ ತೆರಳಿ ಅಲ್ಲಿ ಹೋಮ್‌ ಸ್ಟೇಗಳಲ್ಲಿ ಉಳಿದುಕೊಂಡಿರುವುದಾಗಿ ಸಂತೋ​ಷ್‌​ನೊಂದಿಗೆ ಉಡುಪಿಗೆ ಬಂದಿದ್ದ ಸ್ನೇಹಿ​ತ​ರಾದ ಮೇದಪ್ಪ & ಪ್ರಶಾಂತ್‌ ಶೆಟ್ಟಿ ಬಾಯ್ಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖರೀದಿಸಿದ್ದ 1 ಲೀಟರ್‌ ಕ್ರಿಮಿನಾಶಕ ಸೇವಿಸಿ ಸಂತೋಷ್ ಆತ್ಮಹತ್ಯೆ!