Select Your Language

Notifications

webdunia
webdunia
webdunia
webdunia

ಖರೀದಿಸಿದ್ದ 1 ಲೀಟರ್‌ ಕ್ರಿಮಿನಾಶಕ ಸೇವಿಸಿ ಸಂತೋಷ್ ಆತ್ಮಹತ್ಯೆ!

santhosh patil cudupi belagavi ಈಶ್ವರಪ್ಪ ಸಂತೋಷ್‌ ಪಾಟೀಲ್‌ ಬೆಳಗಾವಿ
bengaluru , ಶನಿವಾರ, 16 ಏಪ್ರಿಲ್ 2022 (14:51 IST)
ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಲಭಿಸಿದ್ದು, ಆತ್ಮಹತೆಗೂ ಮುನ್ನ ತಾನೇ ಕ್ರಿಮಿನಾಶಕ ಔಷಧ ಖರೀದಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿಯ ಶಾಂಭವಿ ಹೋಟೆಲ್‌ ನಲ್ಲಿ ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಮುನ್ನ ಚಿಕ್ಕಮಗಳೂರಿನಲ್ಲಿ 450 ರೂ. ನೀಡಿ 1 ಲೀಟರ್‌ ಕ್ರಿಮಿನಾಶಕ ಖರೀದಿಸಿದ್ದರು ಎಂದು ತನಿಖೆಯ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ತಿಳಿದು ಬಂದಿದೆ.
ತಾನೇ ಖರೀದಿಸಿದ್ದ ಕ್ರಿಮಿನಾಶಕವನ್ನು ಶಾಂಭವಿ ಲಾಡ್ಜ್‌ ನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳೆ ಹುಳುಗಳನ್ನು ಕೊಲ್ಲಲು ಬಳಸುವ ಕ್ರಿಮಿನಾಶಕವನ್ನು ಸಂತೋಷ್‌ ಖರೀದಿಸಿದ್ದು, ರಾತ್ರಿ ಉಡುಪಿ ಲಾಡ್ಜ್‌ ನಲ್ಲಿ ಸ್ನೇಹಿತರ ಜೊತೆಗಿದ್ದಾಗ ಏಕಾಂಗಿಯಾಗಿ ಕೊಠಡಿಗೆ ತೆರಳಿ ನಂತರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್‌ ನಲ್ಲಿ ಆಪ್‌ ಅಧಿಕಾರಕ್ಕೆ 1 ತಿಂಗಳು: ಜುಲೈ 1ರಿಂದ 300 ಯೂನಿಟ್‌ ವಿದ್ಯುತ್‌ ಉಚಿತ!